ಗ್ರೇಸ್, ವಿಲಿಯಂ ಗಿಲ್ಬರ್ಟ್

1848-1945. ವಿಕ್ಟೋರಿಯ ಯುಗದ ಪ್ರಸಿದ್ಧ ಇಂಗ್ಲಿಷ್ ಕ್ರಿಕೆಟ್ ಕ್ರೀಡಾಪಟು. ತನ್ನ ಐವತ್ತು ವರ್ಷಗಳ ಚಟುವಟಿಕೆಗಳಿಂದ ಕ್ರಿಕೆಟ್‍ಟ್ಟನ್ನು ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಿದ ಪ್ರತಿಭಾವಂತ. ಹುಟ್ಟಿದ್ದು ಬ್ರಿಸ್ಟಲ್ ಹತ್ತಿರದ ಡೌನೆಂಡ್‍ನಲ್ಲಿ. ಲಂಡನಿನ ಸೇಂಟ್ ಬಾರ್ತಲೊಮೊದಲ್ಲಿ ವೈದ್ಯ ಶಿಕ್ಷಣ ಮುಗಿಸಿ ಬ್ರಿಸ್ಟಲಿನಲ್ಲಿ ಖಾಸಗಿ ವೈದ್ಯನಾಗಿ ಕೆಲಸ ಮಾಡತೊಡಗಿದ.

ಗ್ರೇಸನ ತಂದೆ ವೈದ್ಯನಾಗಿದ್ದುದರ ಜೊತೆಗೆ ಒಳ್ಳೆಯ ಕ್ರಿಕೆಟ್ ಆಟಗಾರನೂ ಆಗಿದ್ದ. ಅವನೇ ತನ್ನ ಮಗನನ್ನು ಕ್ರಿಕೆಟ್ ಕ್ರೀಡಾ ಜಗತ್ತಿಗೆ ತಂದ. ಗ್ಲಾಸ್ಟರ್ ಷೈರ್ ಪರವಾಗಿ 1865ರಲ್ಲಿ ಮೊದಲಿಗೆ ಕ್ರಿಕೆಟ್ ದಾಂಡನ್ನು ಹಿಡಿದ ಗ್ರೇಸ್ 1908ರ ವರೆಗೂ, ಸುಮಾರು 43 ವರ್ಷಗಳ ಕಾಲ ವೈಭವದಿಂದ ಆಟವಾಡಿ ಅನೇಕ ದಾಖಲೆಗಳನ್ನು ಸ್ಥಾಪಿಸಿದ.
ಪ್ರಸಿದ್ಧ ಕ್ರೀಡಾಪಟುವಾಗಿ ಗ್ರೇಸ್ ಕ್ರಿಕೆಟ್ ಜಗತ್ತಿನಲ್ಲಿ ಸಾಧಿಸಿದ್ದು ಅಂದರೆ 13 ಬಾರಿ ಇಂಗ್ಲೆಂಡ್ ಕ್ರಿಕೆಟ್ ಟೀಮಿನ ಕ್ಯಾಪ್ಟನ್ ಆಗಿದ್ದುದು, 22 ಮುಖ್ಯ ಕ್ರಿಕೆಟ್ ಟೆಸ್ಟುಗಳಲ್ಲಿ ಭಾಗವಹಿಸಿದ್ದುದು. 54,896ರನ್ನುಗಳನ್ನು ಮಾಡಿ, 2,876 ವಿಕೆಟ್ ಗಳಿಸಿ, 871 ಕ್ಯಾಚುಗಳನ್ನು ಹಿಡಿದದ್ದು. ಒಂದೇ ಪಂದ್ಯದಲ್ಲಿ ಈತ ಎರಡು ಶತಕ ಗಳಿಸಿದ ಮೊದಲನೆ ಕ್ರಿಕೆಟ್ ಕ್ರೀಡಾಪಟುವೆಂದು ಹೆಸರು ಗಳಿಸಿದ. 1,000 ರನ್ನುಗಳನ್ನು ಎರಡು ಬಾರಿ ಮಾಡಿದ. ಆಟದ ಒಂದೇ ಸರಣಿಯಲ್ಲಿ (1873) 100 ವಿಕೆಟ್ ಗಳಿಸಿ, ಮೊದಲನೆಯ ದರ್ಜೆಯ ಕ್ರಿಕೆಟ್‍ನಲ್ಲಿ 100 ಶತಕಗಳನ್ನು ಗಿಟ್ಟಿಸಿದ. 1880ರಲ್ಲಿ ಆಸ್ಟ್ರೇಲಿಯದೊಡನೆ ಆಡಿದ ಪ್ರಥಮ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ.											*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ